ಹೊಸಮುಖದ ಕಲಾವಿದರನ್ನ ಕರೆತಂದಿದ್ದು ಪುಟ್ಟಣ್ಣ ಕಣಗಾಲ್

Spread the love

 

ಕನ್ನಡಚಿತ್ರರಂಗ ಬೆಳೆಯಲು ಹೊಸಮುಖದ ಕಲಾವಿದರನ್ನ ಕರೆತಂದಿದ್ದು ಪುಟ್ಟಣ್ಣ ಕಣಗಾಲ್;-
ಕೆ.‌ರಘುರಾಂ ವಾಜಪೇಯಿ ಅಭಿಮತ

ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾಷ್ಟ್ರೀಯ ಪ್ರಶಸ್ತಿಗಳ ವಿಜೇತ ಪುಟ್ಟಣ್ಣ ಕಣಗಾಲ್ ರವರ 91ನೇ ಜನ್ಮದಿನೋತ್ಸವದ ಅಂಗವಾಗಿ ಪರಿವರ್ತನಂ ಟ್ರಸ್ಟ್ ವತಿಯಿಂದ *ಪುಟ್ಟಣ್ಣ ಕಣಗಾಲ್ ನೆನಪಿನಂಗಳ* ಕಾರ್ಯಕ್ರಮವನ್ನು
ಚಾಮರಾಜಪುರಂನಲ್ಲಿರುವ ವಿಷ್ಣುವರ್ಧನ ರಸ್ತೆಯಲ್ಲಿರುವ ಕಛೇರಿಯಲ್ಲಿ ಆಯೋಜಿಸಲಾಯಿತು,

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು,

ನಂತರ ಕಸಾಪ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು ಮಾತನಾಡಿ ಪುಟ್ಟಣ್ಣ ಕಣಗಾಲ್ ರವರ ಚಿತ್ರಗಳು ಕುಟುಂಬಪ್ರಧಾನವಾದ ಚಿತ್ರಗಳು, ಸಮಾಜಿಕ ಸಂದೇಶದ ಜೊತೆಯಲ್ಲೆ ಅವರ ನಿರ್ದೇಶನದಲ್ಲಿ ಮಹಿಳಾ ಪ್ರಧಾನಚಿತ್ರಗಳು, ಮೈಸೂರು ದಸರಾ, ಕೊಡಗಿನ ಕಾವೇರಿ, ಕನ್ಯಾಕುಮಾರಿ, ಮಾನಸಸರೋವರ, ಚಿತ್ರದುರ್ಗದ ಕಲ್ಲಿನ ಕೋಟೆ, ಸೇರಿದಂತೆ ಹಲಾವರು ಇತಿಹಾಸ ಬಿಂಬಿಸುವ ಸ್ಥಳಗಳನ್ನ ಜನರಿಗೆ ಪ್ರಚಾರಪಡಿಸುತ್ತಿದ್ದರು ಎಂದರು,

ನಂತರ ಸಮಾಜಸೇವಕ ಕೆ. ರಘುರಂ ವಾಜಪೇಯಿ ರವರು ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಬಿ.ಆರ್ ಪಂತಲು ರವರ ಮೂಲಕ ಚಿತ್ರನಿರ್ದೇಶನದಲ್ಲಿ ಕೆಲಸ ಮಾಡಿದ ಕಣಗಾಲ್ ಗ್ರಾಮದ ಎಸ್.ಆರ್ ಪುಟ್ಟಣ್ಣ ಕಣಗಾಲ್ ರವರು ಕಾದಂಬರಿ ಆಧಾರಿತ ಚಿತ್ರವನ್ನು ಹೆಚ್ಚಾಗಿ ನಿರ್ದೇಶಿಸಿ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಕಲ್ಪನಾ, ಆರತಿ, ವಜ್ರಮುನಿ, ಶ್ರೀನಾಥ್ ಸೇರಿದಂತೆ ಹೊಸಮುಖದ ಕಲಾವಿದರನ್ನ ಮುಖ್ಯವಾಹಿನಿಗೆ ತಂದರು, ನಾಗರಹಾವು ಚಿತ್ರದ ಸಮಾಜದಲ್ಲಿ ಸಂಸ್ಕಾರ ತೋರಿಸುವ ಗುರು ಶಿಷ್ಯರ ಪಾತ್ರ ಇಂದಿಗೂ ಜನಮಾನದಲ್ಲಿದೆ, ಪುಟ್ಟಣ್ಣ ರವರ ಕ್ರಿಯಾಶೀಲತೆಯಿಂದ ಚಿತ್ರ ನಿರ್ದೇಶಕರಿಗೆ ಮನ್ನಣೆ ಲಭಿಸಿತು
ಎಂದರು

ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ರವರು ಮಾತನಾಡಿ ಪುಟ್ಟಣ್ಣ ಕಣಗಾಲ್ ರವರ ಹೆಸರಿನಲ್ಲಿ ಕನ್ನಡಚಿತ್ರರಂಗ ಅತ್ಯುತ್ತಮ ಚಿತ್ರ ನಿರ್ದೇಶಕ ಎಂದು ಪ್ರತಿವರ್ಷ ಪ್ರಶಸ್ತಿ ನೀಡುತ್ತಾರೆ, ಅದರ ಜೊತೆಯಲ್ಲೆ ಚಿತ್ರನಿರ್ದೇಶಕರ ಕಲಿಕಾ ಸಂಶೋಧನಾ ಘಟಕವನ್ನ ನಿರ್ಮಿಸಬೇಕಿದೆ ಇದರಿಂದ ಸಾಕಷ್ಟು ಯುವಕಲಾವಿದರಿಗೆ ಸ್ಪೂರ್ಥಿ ದೊರೆಯುತ್ತದೆ ಎಂದರು

ಇಲ್ಲಿ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಮಾಜಿನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ, ಜಿ ರಾಘವೇಂದ್ರ, ನಿರೂಪಕ ಅಜಯ್ ಶಾಸ್ತ್ರಿ, ಪರಿವರ್ತನO ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್ ,ಆಲನಹಳ್ಳಿ
ಎಂ ಎನ್ ಚೇತನ್ ಗೌಡ,
ಹಾಗೂ ಇನ್ನಿತರರು ಹಾಜರಿದ್ದರು