ಕುರುಕ್ಷೇತ್ರದಲ್ಲಿ ನೂರಾರು ಅನಿವಾಸಿ ಭಾರತೀಯರಿಂದ ಸಂಪೂರ್ಣ ಗೀತ ಪಠನ
ಹರಿಯಾಣ: ಭಗವದ್ಗೀತೆಯ ಜನ್ಮಸ್ಥಳವಾದ ಕುರುಕ್ಷೇತ್ರದಲ್ಲೇ ಇಂದು ನೂರಾರು ಅನಿವಾಸಿ ಭಾರತೀಯರು ಸೇರಿ ಸಂಪೂರ್ಣ ಗೀತೆಯನ್ನು ಪಠಿಸುವ ಮೂಲಕ ಗುರು ಮಹೋತ್ಸ್‌ವ ಸ್ಮರಣೆಯೊಂದಿಗೆ ಕಾರ್ಯಕ್ರಮವನ್ನು ಅಭೂತಪೂರ್ವ ಯಶಸ್ವಿಗೊಳಿಸಿದರು.
ಅಮೇರಿಕಾ, ಕೆನಡಾ, ಟ್ರಿನಿಡಾಡ್ ಮತ್ತು ಟೊಬಾಗೊ, ಯುಕೆ, ಜರ್ಮನಿ, ಸ್ವಿಟ್ಜರ್ಲೆಂಡ್, ಯುಎಇ, ಕುವೈತ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ 400 ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಗುರು ಮಹೋತ್ಸ್‌ವ ಸ್ಮರಣೆಯೊಂದಿಗೆ ಸಂಪೂರ್ಣ ಗೀತೆಯನ್ನು ಪಠಿಸಿ ಅನನ್ಯ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕುರುಕ್ಷೇತ್ರದಲ್ಲಿ ಈ ಅಭೂತಪೂರ್ವ ಕಾರ್ಯಕ್ರಮವು ಮೈಸೂರಿನ ಅವಧೂತ ದತ್ತಪೀಠದ ಪೀಠಾಧಿಪತಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನೆರವೇರಿತು.
ಹರಿಯಾಣ ರಾಜ್ಯಪಾಲರಾದ ಬಂಡಾರು ದತ್ತಾತ್ರೆಯ ಅವರು ಕಾರ್ಯಕ್ರಮನ್ನು ಉದ್ಘಾಟಿಸಿ,ಶ್ರೀಗಳ ಆಶೀರ್ವಾದ ಪಡೆದರು.
ಕುರುಕ್ಷೇತ್ರ ಯುದ್ದ ನಡೆದಾಗ ಭಗವಾನ್ ಶ್ರೀಕೃಷ್ಣನು ತನ್ನ ಅತ್ಯಾಪ್ತ ಪ್ರಿಯ ಭಕ್ತ ಅರ್ಜುನನಿಗೆ ಬೋದಿಸಿದ ಗೀತೆ ಹುಟ್ಟಿದ ಪುಣ್ಯ ಸ್ಥಳ ಈಗಿನ ಹರಿಯಾಣ ರಾಜ್ಯದ ಕುರುಕ್ಷೇತ್ರ ನಗರ.ಇಂದು ಇದೇ ನಗರದಲ್ಲಿ ಗೀತ ಪಠಣ ಕಾರ್ಯಕ್ರಮ ನಡೆದಿರುವುದು ನಮ್ಮ ನಗರ ಹಾಗೂ ದೇಶದ ಪುಣ್ಯ ಎಂದು ಈ ವೇಳೆ ಗಣ್ಯರು ಬಣ್ಣಿಸಿದರು.
ಇಂತಹ ಅಪೂರ್ವ ಗೀತಾ ಕಂಠಸ್ಥ ಮಾಡಿಸಲು ಪೂಜ್ಯ ಶ್ರೀ ಸ್ವಾಮೀಜಿಯವರ ದರ್ಶನವಾದ ಎಸ್ ಜಿ ಎಸ್ ಗೀತಾ ಪ್ರತಿಷ್ಠಾನವು ಶ್ರಮಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ, ಈ ಮೂಲಕ ಗೀತೆಯನ್ನು ನಾವು ಆಲಿಸುತ್ತಿರುವುದು ನಮ್ಮ ಪುಣ್ಯ ಎಂದು ಕೊಂಡಾಡಿದರು.