ವಿಶೇಷ ಮನವಿ – ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ 39,103 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ

Spread the love

 

ನಮಸ್ತೆ,

ಇಂದಿನಿಂದ *21/03/2025 ಶುಕ್ರವಾರ* ವಿದ್ಯಾರ್ಥಿ ಜೀವನದ ಮಹತ್ವದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ 39,103 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

*ವಿಶೇಷ ಮನವಿ*
ರಸ್ತೆಯಲ್ಲಿ ವಿದ್ಯಾರ್ಥಿಗಳು ನಿಮಗೆ ಡ್ರಾಪ್ ಕೇಳಿದರೆ. ದಯಮಾಡಿ ಅವರಿಗೆ ಸಹಾಯ ಮಾಡಿ ಪರೀಕ್ಷಾ ಕೇಂದ್ರದ ಬಳಿ ಅವರನ್ನು ಡ್ರಾಪ್ ಮಾಡಿ ನಂತರ ನಿಮ್ಮ ಕೆಲಸಕ್ಕೆ ತೆರಳಿ. ಪರೀಕ್ಷಾ ಕೇಂದ್ರದ ಬಳಿ ಇರುವ ಅಂಗಡಿ, ಮನೆಯವರು ಕುಡಿಯುವ ನೀರು ಅಥವಾ ಸಾಧ್ಯವಾದರೆ ಮಜ್ಜಿಗೆ ವ್ಯವಸ್ಥೆ ಮಾಡಿಕೊಡಿ. *ಪೋಷಕರಲ್ಲಿ ವಿಶೇಷ ಮನವಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಅವರಿಗೆ ಗೊತ್ತೋ, ಗೊತ್ತಿಲ್ಲದೆಯೋ ತಪ್ಪು ಮಾಡಿದರೆ ಮನೆಯವರಾಗಲಿ, ಸ್ನೇಹಿತರಾಗಲಿ ಸಂಬಂಧಿಕರಾಗಲಿ ಅವರಿಗೆ ಬಯ್ಯಬೇಡಿ ಮನಸು ನೋಯಿಸಬೇಡಿ‌.* ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಬಹುದು‌. ಸಾಮಾಜಿಕ ಕಳಕಳಿಯೊಂದಿಗೆ‌.

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*