ಮೈಸೂರು-28 ರ0ದು ಶ್ರೀ ಶ್ರೀ ಕೃಷ್ಣ ಬಲರಾಮರ ರಥಯಾತ್ರೆ

Spread the love

 

28 ರ0ದು ಶ್ರೀ ಶ್ರೀ ಕೃಷ್ಣ ಬಲರಾಮರ ರಥಯಾತ್ರೆ
ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞ ಸಂಸ್ಥೆ (ಇಸ್ಕಾನ್) ತನ್ನ 27ನೇ ವಾರ್ಷಿಕ ರಥಯಾತ್ರೆ ಉತ್ಸವವನ್ನು ಶನಿವಾರ, ಡಿಸೆಂಬರ್ 28, 2024 ರಂದು ಆಯೋಜಿಸುತ್ತಿದೆ. ಉದ್ಘಾಟನಾ ಸಮಾರಂಭವು ಸಂಜೆ 4.30 ಕ್ಕೆ ಅರಮನೆಯ ಅಂಜನೇಯ ದೇವಾಲಯದಲ್ಲಿ ನಡೆಯಲಿದೆ. ಶ್ರೀ ಟಿ.ಎಸ್. ಶ್ರೀವತ್ಸ (ಶಾಸಕರು) ಕೃಷ್ಣರಾಜ ಕ್ಷೇತ್ರ, ಶ್ರೀಮತಿ ಸೀಮಾ ಲಾಟ್ಕರ್ (ಪೊಲೀಸ್‌ ಆಯುಕ್ತರು), ಶ್ರೀ ಗೋ. ಮಧುಸೂದನ (ಮಾಜಿ ಶಾಸಕರು, ಮೈಸೂರು) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಮತ್ತು ಸಮಾರಂಭದ ಅಧ್ಯಕ್ಷತೆಯನ್ನು ಪರಮ ಪೂಜ್ಯ ಸ್ತೋಕ ಕೃಷ್ಣ ಸ್ವಾಮಿ (ಅಧ್ಯಕ್ಷರು, ಇಸ್ಕಾನ್ ಮೈಸೂರು) ವಹಿಸಲಿದ್ದಾರೆ.
ಈ ದೈವಿಕ ವರ್ಣರಂಜಿತ ಉತ್ಸವವು ಸಂಜೆ 5.30 ಕ್ಕೆ ಅರಮನೆಯ ಅಂಜನೇಯ ದೇವಾಲಯದಿಂದ ಪ್ರಾರಂಭವಾಗಿ ಗಾಂಧಿ ಚೌಕ, ಸಯ್ಯಾಜಿ ರಾವ್ ರಸ್ತೆ, ಸಣ್ಣ ಗಡಿಯಾರ ಗೋಪುರ, ದೇವರಾಜ ಅರಸ್ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ರಾಮಸ್ವಾಮಿ ವೃತ್ತ, ಜೆ ಎಲ್ ಬಿ ರಸ್ತೆ, ಆರ್ಟಿಒ ವೃತ್ತ, ಬಲ್ಲಾಳ ವೃತ್ತ, ಹೊಸ ಕಂಠೀರವ ಅರಸ್ ರಸ್ತೆ, ಜಯನಗರ 2ನೇ ಮುಖ್ಯ ರಸ್ತೆಗಳ ಮೂಲಕ ಸಂಚರಿಸಿ, ಜಯನಗರದ 18ನೇ ಕ್ರಾಸ್‌ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಸಂಪನ್ನಗೊಳ್ಳಲಿದೆ. ಈ ರಥಯಾತ್ರೆಯಲ್ಲಿ 35 ಅಡಿ ಎತ್ತರದ ರಥದಲ್ಲಿ ಶ್ರೀ ಶ್ರೀ ಕೃಷ್ಣ ಬಲರಾಮರ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ. ಇಸ್ಕಾನ್ ಭಕ್ತರಿಂದ ಸಂಕೀರ್ತನೆ ಮತ್ತು 30,000 ಕ್ಕೂ ಹೆಚ್ಚು ಜನರಿಗೆ ಪ್ರಸಾದ ವಿತರಣೆ ನಡೆಯಲಿದೆ.
ಜನವರಿ 10ರಂದು ವೈಕುಂಠ ಏಕಾದಶಿ ಕಾರ್ಯಕ್ರಮ
ಜನವರಿ 10ರಂದು ಇಸ್ಕಾನ್ ದೇವಸ್ಥಾನದಲ್ಲಿ ವಿಶೇಷವಾಗಿ ವೈಕುಂಠ ಏಕಾ ಶಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಂಕಜ್ ದಾಸ್ ತಿಳಿಸಿದರು. ಒಂದು ಬೆಳಗ್ಗೆ 6:30 ರಿಂದ ರಾತ್ರಿ ಅವರಿಗೆ ದರ್ಶನ ಇರುತ್ತದೆ ಬೆಳಗ್ಗೆ 9:00 ರಿಂದ ರಾತ್ರಿ 9:30ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಭಜನಾ ಕಾರ್ಯಕ್ರಮ ಇರುತ್ತದೆ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಅಂದು ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅವರು ಇಂದು ಬೆಳಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು