ಮೈಸೂರು-ಸಿಸಿಬಿ ಘಟಕದಿಂದ ಆರೋಪಿಯ ಬಂಧನ

Spread the love

18 ಲಕ್ಷ ಮೌಲ್ಯದ 217 ಗ್ರಾಂ ಚಿನ್ನಾಭರಣಗಳು ವಶ

ಮೈಸೂರು ನಗರ ಸಿಸಿಬಿ ಘಟಕದಿಂದ ಆರೋಪಿಯ ಬಂಧನ. ಒಟ್ಟು 18 ಲಕ್ಷ ಮೌಲ್ಯದ 217 ಗ್ರಾಂ ಚಿನ್ನಾಭರಣಗಳು, 1.560- ಕೆ.ಜಿ ತೂಕದ ಬೆಳ್ಳಿಯ ಪದಾರ್ಥಗಳು ಮತ್ತು 01 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಮೈಸೂರು ನಗರದ ನರಸಿಂಹರಾಜ ಪೊಲೀಸ್ ಠಾಣೆಯ ಕನ್ನ ಕಳುವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು :04/12/2024 ರಂದು ಮೈಸೂರು ನಗರದ ಮಂಡಿ ಮೊಹಲ್ಲಾದ 2ನೇ ಈದ್ದಾದ ಬಳಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆತನು ಮತ್ತೊಬ್ಬ ಆರೋಪಿಯೊಂದಿಗೆ ಸೇರಿ ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 07 ಕನ್ನ ಕಳವು ಹಾಗೂ 01 ದ್ವಿಚಕ್ರವಾಹನ ಕಳ್ಳತನ ಮಾಡಿರುವುದಾಗಿ ಒಪ್ಪಕೊಂಡ ಮೇರೆಗೆ ಆರೋಪಿತನಿಂದ ಒಟ್ಟು 18,00,000/- ರೂ ಬೆಲೆಬಾಳುವ 217 ಗ್ರಾಂ ಚಿನ್ನ ಮತ್ತು 1560 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಹಾಗೂ ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿರುತ್ತದೆ. ಈ ಪತ್ತೆ ಕಾರ್ಯದಿಂದ ಮೈಸೂರು ನಗರದ ನಜರ್ ಬಾದ್ ಪೊಲೀಸ್ ಠಾಣೆಯ -1, ನರಸಿಂಹರಾಜ ಪೊಲೀಸ್ ಠಾಣೆಯ-1, ಮೈಸೂರು ಜಿಲ್ಲೆಯ ಹುಣುಸೂರು ಟೌನ್ ಠಾಣೆಯ -4 ಮತ್ತು ಕೆ. ಆರ್ ನಗರ ಪೊಲೀಸ್ ಠಾಣೆಯ -2 ಕಳುವು (ಒಟ್ಟು 8) ಪ್ರಕರಣಗಳು ಪತ್ತೆಯಾಗಿರುತ್ತವೆ. ಅಲ್ಲದೆ ಈ ಆರೋಪಿಯು ಮೈಸೂರು ನಗರದ 4 ಕಳುವು ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ ಆರೋಪಿಯಾಗಿದ್ದು ಪತ್ತೆಯಾದಂತಾಗಿದೆ. ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ ಪೊಲೀಸ್ ಇಲಾಖೆ ನೀಡಿರುವ ಪ್ರಕಟನೆಯಲ್ಲಿ ತಿಳಿಸಲಾಗಿದೆ