ವಿಜಯನಗರ ಪೊಲೀಸರಿಂದ 07 ಜನ ಆರೋಪಿಗಳ ಬಂಧನ, ಒಟ್ಟು 7,00,000/- ರೂ ಮೌಲ್ಯದ 606 ಕೆ.ಜಿ ತೂಕದ ತಾಮ್ರದ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ 01 ಟಾಟಾ ಸುಮೋ ವಾಹನ ವಶ ಪಡಿಸಿಕೊಂಡಿದ್ದಾರೆ
ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿರುವ ಮ್ಯಾಗ್ನಟೆಕ್ ಫಾಕ್ಟರಿಯಲ್ಲಿ ಕಳ್ಳರು ಅಲ್ಲಿನ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ:171/2024 ಕಲಂ:305,331(3)(4) ಬಿ.ಎನ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ಆರೋಪಿತ ಮತ್ತು ಕಳುವು ಮಾಲು ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.
ದಿನಾಂಕ:26.10.2024 ರಂದು 03 ಕಳುವು ಆರೋಪಿಗಳನ್ನು, ದಿನಾಂಕ:29.10.2024 ರಂದು ಇತರೆ 03 ಕಳುವು ಆರೋಪಿಗಳನ್ನು ಮತ್ತು ದಿನಾಂಕ:14.12.2024 ರಂದು ಮತ್ತೊಂಬ್ಬ ಆರೋಪಿಯನ್ನು ಪತ್ತೆ ಮಾಡಿ ದಸ್ತಗಿರಿ ಕ್ರಮ ಕೈಗೊಂಡು ಅವರು ಕಳುವು ಮಾಡಿದ 7 ಲಕ್ಷ ರೂ ಮೌಲ್ಯದ 606 ಕೆ.ಜಿ ತೂಕದ ತಾಮ್ರದ ವೈರ್ ಮತ್ತು ಕಳುವು ಮಾಡಲು ಬಳಸಿದ ಟಾಟಾ ಸುಮೋ ವಾಹನವನ್ನು ವಶಕ್ಕೆ ಪಡೆದು ಕ್ರಮಕೈಗೊಂಡು ಆರೋಪಿತರನ್ನು ಘನ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ, ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ರವರ ಮಾರ್ಗದರ್ಶನದಲ್ಲಿ, ವಿಜಯನಗರ ವಿಭಾಗದ ಎಸಿಪಿರವರಾದ ಗಜೇಂದ್ರ ಪ್ರಸಾದ್ ರವರ ನೇತೃತ್ವದಲ್ಲಿ ವಿಜಯನಗರ ಪೊಲೀಸ್ ಇನ್ಸ್‌ಪೆಕ್ಟರ್‌ರವರಾದ ಸುರೇಶ್ ಕುಮಾರ್ ಎಸ್.ಡಿ, ಪಿ.ಎಸ್.ಐ ರವರಾದ ವಿಶ್ವನಾಥ, ನಾರಾಯಣ್ ಕೆ ಮತ್ತು ಕೃಷ್ಣ ಡಿ. ಸಿಬ್ಬಂದಿಯವರುಗಳಾದ ಶಂಕರ್, ಪ್ರದೀಪ್ ಕುಮಾರ್ ಹೆಚ್.ಕೆ. ಪರಮೇಶ ಬಿ. ಲೋಕೇಶ್ ಕೆ.ಎನ್. ಲೋಕೇಶ್ ಹೆಚ್.ಎಸ್. ಮಂಜುನಾಥ್ ಕೆ.ಎನ್. ವೆಂಕಟೇಶ್, ಪರಮೇಶ್, ಶಿವಕುಮಾರ್, ಅಜ್ರಾ, ರಂಜಿತಾ, ತಾಂತ್ರಿಕ ಸಿಬ್ಬಂದಿಯವರುಗಳಾದ ಕುಮಾರ್, ಮಂಜು, ಶ್ಯಾಮ್ ರವರುಗಳು ಕೈಗೊಂಡಿರುತ್ತಾರೆ.