ಪ್ರತಿಭಾನ್ವಿತ ಹೊಸ ಕಲಾವಿದರಿಗೆ ಧ್ವನಿಯಾಗಲು ನನ್ನ ಡಾಲಿ ಪಿಕ್ಚರ್ಸ್ ನಿರ್ಮಾಣ ಖುಷಿ ತಂದಿದೆ
:- ನಟ ಡಾಲಿ ಧನಂಜಯ
ಮೈಸೂರು ಜೆಕೆ ಮೈದಾನದಲ್ಲಿ ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ವತಿಯಿಂದ
4 ನೇ ವರ್ಷದ ಮೈಸೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಸಿನಿ ಸಂತೆ ಸಮಾರೋಪದಲ್ಲಿ ಅತ್ಯುತ್ತಮ
65ಕ್ಕೂ ಹೆಚ್ಚು ಶಾರ್ಟ್ ಮೂವೀಸ್, ಕಿರುಚಿತ್ರ ಚಿತ್ರಗಳಿಗೆ
ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಮಾರಂಭವನ್ನ ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ ಉದ್ಘಾಟಿಸಿದರು,
ನಂತರ ನಟ ಡಾಲಿ ಧನಂಜಯ ರವರು ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಮುಖದ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದರು ಸೂಕ್ತ ವೇದಿಕೆ ಸಿಕ್ಕಿರುವುದಿಲ್ಲ, ಹೊಸ ಪ್ರಯೋಗಗಳು, ನಿರ್ದೇಶನ, ಸಂಗೀತ ಸಾಹಿತ್ಯ ಇವೆಲ್ಲವುದಕ್ಕೂ ಮನ್ನಣೆ ನೀಡಲು ಸಿನಿ ಸಂತೆ ತರಹದ ವಸ್ತುಪ್ರದರ್ಶನ ಪ್ರಶಸ್ತಿ ಪ್ರಧಾನ ಆಯೋಜನೆ ಉತ್ತಮ ಬೆಳವಣಿಗೆ, ಕಲಾವಿದರಾಗಿ ನಾವು ಬೆಳೆಯುವ ಜೊತೆಯಲ್ಲೆ ಹೊಸ ಮುಖದ ಕಲಾವಿದರನ್ನು ಕರೆ ತಂದು ವೇದಿಕೆ ಕಲ್ಪಿಸಿ ಪರಿಚಯಿಸಿ ಪ್ರೋತ್ಸಾಹಿಸಿದರೆ ಕಲಾವಿದನಲ್ಲಿರುವ ಕಲೆ ಸಾರ್ಥಕವಾಗುತ್ತದೆ ಎಂದರು,
ನಂತರ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ರವರು ಮಾತನಾಡಿ ಮೈಸೂರು ಕಲಾವಿದರ ತವರೂರು, ನಾಟಕ ನೃತ್ಯ ಗಾಯನ ರಂಗಭೂಮಿ ಸಿನಿಮಾ ಕ್ಷೇತ್ರದಲ್ಲಿ ಸಾವಿರಾರು ಕಲಾವಿದರು ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನ ಶ್ರೀಮಂತಗೊಳಿಸಿದ್ದಾರೆ, ನಮ್ಮ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಮುಂದಿನ ದಿನದಲ್ಲಿ ಬೇಸಿಗೆ ಶಿಬಿರ ಕಲಾಸಕ್ತರಿಗಾಗಿ ತರಬೇತಿ ಶಿಬಿರವನ್ನ ಆಯೋಜಿಸಿ ಹೊಸ ಮುಖದ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಚಿಂತನೆಯಿದೆ ಎಂದರು,
ಇದೇ ಸಂದರ್ಭದಲ್ಲಿ ಮೈಸೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಆಯೋಜಕರಾದ ರಂಜಿತ ಸುಬ್ರಹ್ಮಣ್ಯ ಹಾಗೂ ಸಂಧ್ಯಾ ರಾಣಿ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕರಾದ ಅಜಯ್ ಶಾಸ್ತ್ರಿ, ಕ ಇನ್ನಿತರರು ಹಾಜರಿದ್ದರು