ಬೆಂಗಳೂರು,- ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ರವರ ನಿಧನದ ಗೌರವಾರ್ಥ ನಾಳೆ ರಾಜ್ಯದ್ಯಂತ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಎಲ್ಲಾ ಶಾಲಾ ಕಾಲೇಜುಗಳಿಗೂ ಕೂಡ ರಜಾ ಘೋಷಿಸಲಾಗಿದೆ.
ರಾಜ್ಯ ಸರ್ಕಾರದ ಕಟ್ಟಡಗಳ ಮೇಲೆ ಅರ್ಧ ಧ್ವಜವನ್ನು ಹಾರಿಸಲಾಗುವುದು
ನಾಳೆ ಬೆಳಗ್ಗೆ 8:00 ಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ ರಾಜ್ಯದ್ಯಂತ ಮೂರು ದಿನಗಳು ಯಾವುದೇ ಸಭೆ ಸಮಾರಂಭ ನಡೆಯುವುದಿಲ್ಲ ಎಂದು ಸರ್ಕಾರದ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನಾಳೆ ಸೋಮನಹಳ್ಳಿಯಲ್ಲಿ ಸಂಜೆ 4:00 ಗಂಟೆಗ ಎಸ್ಎಮ್ ಕೃಷ್ಣ ರವರ ಅಂತ್ಯಕ್ರಿಯೆ ನಡೆಯಲಿದ್ದು ಸಕಲವೂ ಸರ್ಕಾರದ ಗೌರವದೊಂದಿಗೆ ನಡೆಯಲಿದೆ ಎಂದು ತಿಳಿಸಲಾಗಿದೆ.