ನವೆಂಬರ್ 30 ಹಾಗೂ ಡಿಸೆಂಬರ್ 01-ಚುಂಚನಕಟ್ಟೆ ಜಲಪಾತೋತ್ಸವ

Spread the love

 

ಪ್ರಸಕ್ತ 2024 ಸಾಲಿನ ಚುಂಚನಕಟ್ಟೆ ಜಲಪಾತೋತ್ಸವ ಕ
* ಜಿಲ್ಲಾಡಳಿತ ಮೈಸೂರು, ಜಿಲ್ಲಾ ಪಂಚಾಯತ್ ಮೈಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ಹಾಗೂ ಪ್ರವಾಸೋದ್ಯಮ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಇದೆ ನವೆಂಬರ್ 30 ಹಾಗೂ ಡಿಸೆಂಬರ್ 01, 2024ರ ಎರಡು ದಿನಗಳು ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ತಾಲ್ಲೂಕಿನಲ್ಲಿ ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ: 30. ನವೆಂಬರ್ 2024ರ ಸಂಜೆ 6.30 ಗಂಟೆಗೆ ಶ್ರೀರಾಮ ದೇವಸ್ಥಾನದ ಆವರಣ, ಚುಂಚನಕಟ್ಟೆ, ಸಾಲಿಗ್ರಾಮ ತಾಲ್ಲೂಕು ಇಲ್ಲಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಘನ ಉಪಸ್ಥಿತಿಯಲ್ಲಿ ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮವನ್ನು ಮಾನ್ಯ ಸಮಾಜ ಕಲ್ಯಾಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪರವರು ಉದ್ಘಾಟಿಸಲಿದ್ದಾರೆ. ಹಾಗೂ ಈ ಕಾರ್ಯಕ್ರಮದಲ್ಲಿ ಮಾನ್ಯ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಶ್ರೀ ಕೆ.ವೆಂಕಟೇಶ್ ರವರು. ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಶಿವರಾಜ ಎಸ್.ತಂಗಡಗಿ ರವರು ಗೌರವ ಉಪಸ್ಥಿತಿ ಇರುತ್ತಾರೆ. ಹಾಗೂ ಉಳಿದಂತೆ ಜಿಲ್ಲಾ ಶಿಷ್ಟಾಚಾರದಂತೆ ಮೈಸೂರು ಜಿಲ್ಲೆಯ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳನ್ನು ಈ ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಮುಂದುವರೆದು
+ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ಮತ್ತು ಶ್ರೀರಾಮ ದೇವಸ್ಥಾನಕ್ಕೆ ತೆರಳುವ ಮಾರ್ಗಕ್ಕೆ ವಿದ್ಯುತ್ ದೀಪಲಂಕಾರ ಮತ್ತು ಚುಂಚನಕಟ್ಟೆ ಜಲಪಾತಕ್ಕೆ ದೀಪಲಂಕಾರ ಮಾಡಲಾಗಿರುತ್ತದೆ ಇಂದು ಕೆ ಆರ್ ನಗರದ ಶಾಸಕರು ರವಿಶಂಕರ್ ಅವರು ತಿಳಿಸಿ ದರು
+ ದಿ: 30-11-2024ರ ಶನಿವಾರರಂದು ಸಂಜೆ 4.30 ಗಂಟೆಗೆ ಬಸವಯ್ಯ (ಲಕ್ಷ್ಮಿ ರಾಮ್) ಮತ್ತು ತಂಡದವರಿಂದ ಜನಪದ ಝೇಂಕಾರ, ಸಂಜೆ 5.00 ಗಂಟೆಗೆ ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡದವರಿಂದ ಕನ್ನಡ ಸಂಗೀತ ವೈಭವ (ಕನ್ನಡ ಗೀತ ಡಿಂಡಿಮ), ರಾತ್ರಿ 7.30 ಗಂಟೆಗೆ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಗಾಯಕರಾದ ರಘು ದೀಕ್ಷಿತ್ ಮತ್ತು ತಂಡದವರಿಂದ ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
* ದಿ: 01-12-2024ರ ಭಾನುವಾರರಂದು ಸಂಜೆ 4.30 ಗಂಟೆಗೆ ರಶ್ಮಿ ಮತ್ತು ತಂಡದವರಿಂದ ಜನಪದ ಸಂಗೀತ, ಸಂಜೆ 5.00 ಗಂಟೆಗೆ ಯು.ರಾಜೇಶ್ ಪಡಿಯಾರ್ ಹಾಗೂ ರಶ್ಮಿ ಚಿಕ್ಕಮಗಳೂರು ಮತ್ತು ತಂಡದವರಿಂದ ಸಿ.ಅಶ್ವಥ್ ಗೀತೆಗಳ ಗಾಯನ (ಕನ್ನಡವೇ ಸತ್ಯ- ಕನ್ನಡವೇ ನಿತ್ಯ), ಸಂಜೆ 6.30 ಗಂಟೆಗೆ ಖ್ಯಾತ ನಟಿ ಪುಷ್ಪಾವತಿ ಖ್ಯಾತಿಯ ನಿಮಿಕಾ ರತ್ನಾಕ‌ರ್ ಹಾಗೂ ಖ್ಯಾತ ಕಿರುತೆರೆ ನಟಿ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ರವರಿಂದ ಸ್ಯಾಂಡಲ್‌ವುಡ್ ನೈಟ್ಸ್, ರಾತ್ರಿ 7.30 ಗಂಟೆಗೆ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಗಾಯಕರಾದ ಮಣಿಕಾಂತ್ ಕದ್ರಿ ಮತ್ತು ಹಂಸಿಕಾ ಅಯ್ಯರ್ ತಂಡದವರಿಂದ ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಅವಕಾಶವಾಗಲು ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಹೆಚ್ಚಿನ ಪ್ರಚಾರ ನೀಡಬೇಕಾಗಿ ಕೋರಿದೆ.