*ನೈಋತ್ಯ ರೈಲ್ವೆ ಮೈಸೂರು ವಿಭಾಗ*
ರೈಲು ಸಂ. 06583/06584 (ಬೆಂಗಳೂರು-ಹಾಸನ) ಡೀಮು ರೈಲು ಸೇವೆಯನ್ನು ಮೆಮು ರೈಲು ಸೇವೆಯಾಗಿ ಪರಿವರ್ತನೆ
ನೈಋತ್ಯ ರೈಲ್ವೆಯು, ರೈಲು ಸಂ. 06583/06584 (ಕೆಎಸ್‌ಆರ್ ಬೆಂಗಳೂರು – ಹಾಸನ – ಕೆಎಸ್‌ಆರ್ ಬೆಂಗಳೂರು) ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡೀಮು) ರೈಲು ಸೇವೆಯನ್ನು ಮೈನ್ ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಮೆಮು) ರೈಲು ಸೇವೆಯಾಗಿ ಪರಿವರ್ತನೆ ಮಾಡಲು ನಿರ್ಧರಿಸಿದೆ.
ಈ ಬದಲಾವಣೆ 27 ಡಿಸೆಂಬರ್ 2024ರಿಂದ ಜಾರಿಗೆ ಬರಲಿದೆ, ಈ ಬದಲಾವಣೆಯು ಪ್ರಯಾಣಿಕರ ಅನುಕೂಲತೆ ಮತ್ತು ರೈಲು ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರೈಲು ಗಾಡಿಯು ಈಗಿರುವ ಸಂಯೋಜನೆಯಂತೆಯೇ 08 ಬೋಗಿಗಳ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸಲಿದೆ.
ನೈಋತ್ಯ ರೈಲ್ವೆಯೂ ಪ್ರಯಾಣಿಕರಿಗೆ ಉತ್ತಮ ಹಾಗೂ ಸುಧಾರಿತ ರೈಲು ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕಾರ್ಯ ಮುಂದುವರಿಸುತ್ತಿದೆ. ರೈಲು ಸೇವೆಗಳನ್ನು ಆಧುನೀಕರಣಗೊಳಿಸಲು ಮತ್ತು ಪ್ರಯಾಣದ ಅನುಭವವನ್ನು ಸುಧಾರಿಸಲು ನಮ್ಮ ಪ್ರಯತ್ನಗಳನ್ನು ನಿರಂತರವಾಗಿ ಕೈಗೊಳ್ಳಾಗುತ್ತಿದೆ.
ಗಿರೀಶ ಧರ್ಮರಾಜ ಕಲಗೊಂಡ
ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ
ಮೈಸೂರು ವಿಭಾಗ