ಡಾ.ಭೇರ್ಯ ರಾಮಕುಮಾರ್ ಅವರಿಗೆ ಸ್ವಾಮಿ ವಿವೇಕಾನಂದ ಪ್ರಶಸ್ತಿ ಪ್ರದಾನ

Spread the love

 

ಸಾಹಿತಿ , ಕನ್ನಡಪರ ಚಿಂತಕ
ಡಾ.ಭೇರ್ಯ ರಾಮಕುಮಾರ್ ಅವರಿಗೆ ಸ್ವಾಮಿ ವಿವೇಕಾನಂದ ಪ್ರಶಸ್ತಿ ಪ್ರದಾನ

ಮೈಸೂರಿನ ಹಿರಿಯ ಸಾಹಿತಿ , ಪತ್ರಕರ್ತ, ಕನ್ನಡಪರ ಚಿಂತಕ ಹಾಗೂ ಪರಿಸರ ಪ್ರೇಮಿ ಡಾ.ಭೇರ್ಯ ರಾಮಕುಮಾರ್ ಅವರಿಗೆ ಬೆಂಗಳೂರಿನ ಚೈತನ್ಯ ಅಂತರ ರಾಷ್ಟ್ರೀಯ ಆರ್ಟ್ಸ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದ ರಾಜ್ಯಪ್ರಶಸ್ತಿಯನ್ನು ಬೆಂಗಳೂರಿನ ಕೆಂಪೇಗೌಡನಗರದ ಉದಯ ಭಾನು ಕಲಾ ಸಂಘದಲ್ಲಿ ಭಾನುವಾರದಂದು ಜನವರಿ 5 ರಂದು ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯ್ತು.

ಬೆಂಗಳೂರಿನ ಲೇಖಕಿ ಹಾಗೂ ಸಮಾಜಸೇವಕಿ ಡಾ.ಸೌಜನ್ಯ ಶರತ್ ಚಂದ್ರ ಪ್ರಶಸ್ತಿ ಪ್ರಧಾನ ಮಾಡಿದರು. ಹಿರಿಯ ಸಂಘಟಕರಾದ ನೀಲಕಂಠ ಅಡಿಗ ,ಹಾಸನದ ಸಮಾಜ ಸೇವಕರಾದ ಡಾ. ಎಂ. ಸಿ.ರಾಜು, ಕೊಡಗಿನ ಕವಿ ಎಂ. ಡಿ.ಅಯ್ಯಪ್ಪ ,ಅಧ್ಯಾತ್ಮಿಕ ಚಿಂತಕ ಮುದ್ದಪ್ಪ ಆರಾಧ್ಯ ,ಚೈತನ್ಯ ಅಂತರ ರಾಷ್ಟ್ರೀಯ ಆಕಾಡೆಮಿ ಅಧ್ಯಕ್ಷರಾದ ಡಾ. ವಸುಧಾ ಶ್ರೀನಾಥ್ ವೇದಿಕೆಯಲ್ಲಿ ಇದ್ದರು.

ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ಅಧ್ಯಕ್ಷರಾಗಿ 354 ಸಾಹಿತ್ಯ ಕಾರ್ಯಕ್ರಮಗಳ ಸಂಘಟನೆ , ಉದಯೋನ್ಮುಖ ಬರಹಗಾರರ 303 ಸಾಹಿತ್ಯ ಕೃತಿಗಳ ಪ್ರಕಟಣೆ, ಸಾಮೂಹಿಕ ನೇತ್ರದಾನ ಕಾರ್ಯಕ್ರಮದ ಮೂಲಕ ನೇತ್ರದಾನ ಮಾಡಲು ಎಂಟು ಸಾವಿರಕ್ಕೂ ಹೆಚ್ಚು ಜನರ ಮನ ಒಲಿಸುವಿಕೆ , ಐದು ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಸಸಿಗಳ ಉಚಿತ ವಿತರಣೆ …ಈ ಸಾಧನೆಗಳನ್ನು ಪರಿಗಣಿಸಿ ಸ್ವಾಮಿ ವಿವೇಕಾನಂದ
ಪ್ರಶಸ್ತಿ ನೀಡಿ ಇವರನ್ನು ಗೌರವಿಸಲಾಗಿದೆ.

ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಕನ್ನಡ ಭಾಷೆ ಬಳಸದ ಐದು ನೂರಕ್ಕೂ ಹೆಚ್ಚು ಅನ್ಯ ಭಾಷಾ ಫಲಕಗಳ ಬಗ್ಗೆ ದೂರು ಸಲ್ಲಿಕೆ, ಕನ್ನಡ ಭಾಷೆ ಬಳಸದ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ದೂರು , ಐದು ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಡು – ನುಡಿಯ ಮಹತ್ವ ಕುರಿತು ಉಪನ್ಯಾಸ ,ಆಯ್ದ ಶಾಲಾ ಕಾಲೇಜುಗಳಿಗೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಕನ್ನಡ ಭಾವ ಚಿತ್ರಗಳ ನೀಡಿಕೆ ಮಾಡುವ ಮೂಲಕ ಸಾಹಿತಿ ಭೇರ್ಯ ರಾಮಕುಮಾರ್ ಸುವರ್ಣ ಕರ್ನಾಟಕಕ್ಕೆ ತಮ್ಮದೇ ಅದ ಮಹತ್ವದ ಕೊಡುಗೆ ನೀಡಿದ್ದಾರೆ.ಈ ಕೊಡುಗೆಗಳನ್ನು ಪರಿಗಣಿಸಿ ಭೇರ್ಯ ರಾಮಕುಮಾರ್ ಅವರನ್ನು ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಚೇತನ ಆಕಾಡೆಮಿ ಪ್ರಕಟಣೆ ತಿಳಿಸಿದೆ.