-ಟಿ ನರಸೀಪುರದಲ್ಲಿ ಇಂದಿನಿಂದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ 

Spread the love

 

ಮೈಸೂರು-ಟಿ ನರಸೀಪುರದಲ್ಲಿ ಇಂದಿನಿಂದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ
ತಿರಮಕೂಡಲು-ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ದಕ್ಷಿಣ ಭಾರತದ ಮಹಾಕುಂಭ ಮೇಳಾದ  ಪವಿತ್ರ ಪ್ರಾಂಗಣದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಹಾಗೂ ಶಿವ ದರ್ಶನ ಪ್ರದರ್ಶನದ ಉದ್ಘಾಟನಾ ಸಮಾರಂಭವನ್ನು ಫೆಬ್ರವರಿ 10 ಸೋಮವಾರ ಸಂಜೆ 04:00ಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಶಾಂಭವೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿವ್ಯಸಾನಿದ್ಯವನ್ನು ಶ್ರೀ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಲಿದ್ದಾರೆ. ಶ್ರೀ ಸೋಮನಾಥ ಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ ಬಿಕೆ ಲಕ್ಷ್ಮೀಜೀಯವರು ಅಧ್ಯಕ್ಷತೆ ವಹಿಸಲಿದ್ದಾರೆ ಪ್ರಭಾಮಣೀಜಿಯವರು ಸಂದೇಶ ನೀಡಲಿದ್ದಾರೆ. ಯೋಗಾನುಭೂತಿಯನ್ನು ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀಯವರು ಮಾಡಿಸಲಿದ್ದಾರೆ ಹಳೆ ತಿರುಮಕೂಡಲು ಶ್ರೀ ಚೌಡೇಶ್ವರಿ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿರುವ ಓಂ ಶಾಂತಿ ಮಂಟಪದಲ್ಲಿ ಸಾರ್ವಜನಿಕರಿಗಾಗಿ ಬೆಳಗ್ಗೆ 7ರಿಂದ ಸಂಜೆ 9ಗಂಟೆಯವರೆಗೆ  ಮೂರು ದಿನಗಳು ಉಚಿತವಾಗಿ ತೆರೆಯಲಾಗಿರುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುಣ್ಯ ದರ್ಶನ ಮಾಡುವಂತೆ ಸೂಚಿಸಿದ್ದಾರೆ