ಜಯನಗರದಲ್ಲಿ ಮನೆ ಮನೆಗೆ ತೆರಳಿ ಕುಂದು ಕೊರತೆ ಆಲಿಸಿದ ಟಿ. ಎಸ್. ಶ್ರೀವತ್ಸ

Spread the love

 

*ಜಯನಗರದಲ್ಲಿ ಮನೆ ಮನೆಗೆ ತೆರಳಿ ಕುಂದು ಕೊರತೆ ಆಲಿಸಿದ ಟಿ. ಎಸ್. ಶ್ರೀವತ್ಸ*

ವಾರ್ಡ್ 48ರ ಜಯನಗರ ಭಾಗದಲ್ಲಿ ಜಯನಗರ ರಾಮಮಂದಿರದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಕುಂದು ಕೊರತೆ ಅಹವಾಲುಗಳನ್ನು ಸ್ವೀಕರಿಸಿದ ಶಾಸಕ ಟಿ ಎಸ್ ಶ್ರೀವತ್ಸ ಬಳಿಕ ಮಾತನಾಡಿ
ಈಗಾಗಲೇ ನಿರಂತರವಾಗಿ ಕ್ಷೇತ್ರದ ಪ್ರತಿ ವಾರ್ಡಿನ ಮನೆ ಮನೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದೇವೆ ಹಾಗೂ ಕೆಲವೊಂದು ಪರಿಹರಿಸಿದ್ದೇವೆ ಅದರಂತೆ ಇಂದು ಜಯನಗರದ ವಾರ್ಡಿನಲ್ಲೂ ಸಹ ಮನೆ ಮನೆಗೆ ಭೇಟಿ ನೀಡಿದಾಗ
ಸ್ಥಳೀಯ ನಿವಾಸಿಗಳಿಂದ ರಸ್ತೆ ಬದಿಯಲ್ಲಿರುವ ಮರಗಳನ್ನು ಟ್ರಿಮ್ ಹಾಗೂ ಚರಂಡಿಗಳಲ್ಲಿ ಊಲುಬ್ಬಿಸುವುದು, ಕನ್ಸರ್ವೇಷನ್ ಗಲ್ಲಿಯನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ತಿಳಿಸಿದ್ದಾರೆ ಎಂದರು..

ನಂತರ ಸ್ಥಳದಲ್ಲೇ ಇದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚಿಸಲಾಯಿತು..

ಇದೇ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ
ರಾಕೇಶ್ ಗೌಡ, ಪ್ರದೀಪ್,ಜೋಗಿಮಂಜು ಕೆ.ಜೆ.ರಮೇಶ್, ಸುಜಾತಾ, ರಾಮ್ ಪ್ರಸಾದ್ , ಪ್ರದೀಪ್ ಕುಮಾರ್, ಭಾನುಪ್ರಕಾಶ್, ಕಿಶೋರ್. ಶಶಿ. ಕೀರ್ತಿ .
ಆಪ್ತ ಸಹಾಯಕ ಆದಿತ್ಯ. ವಲಯ ಕಚೇರಿ 2 ರ ಸಹಾಯಕ ಆಯುಕ್ತರಾದ ನಾಗರಾಜ್. ಅಭಿವೃದ್ಧಿ ಅಧಿಕಾರಿ ಚೇತನ್ ಬಾಬು. ಇಂಜಿನಿಯರ್ ಧನುಷ್, ವಾರ್ಡಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು…