*ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ- ಡಿ ಎಸ್ ರಮೇಶ್*
ಮೈಸೂರು,ಜ.- ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಜೊತೆಗೆ ಪ್ರತಿಯೊಂದು ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಂಡಾಗ ನಾವು ನಮ್ಮನ್ನೇ ಮರೆತು ಬಿಡುವಷ್ಟು ಉತ್ಸಾಹ, ಸಂತೋಷ ಉಂಟಾಗುತ್ತದೆ ಎಂದು ಪ್ರಾದೇಶಿಕ ಆಯುಕ್ತರಾದ ಡಿ. ಎಸ್ ರಮೇಶ್ ಅವರು ಹೇಳಿದರು.
ಇಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೈಸೂರಿನ ವಿವಿ ಸ್ಪೋರ್ಟ್ಸ್ ಫೆವಿಲಿಯನ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ನೌಕರರಿಗೆ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಎಷ್ಟೇ ದೊಡ್ಡವರಾದರು ಸಹ ಮಕ್ಕಳಾಗುವುದಕ್ಕೆ ಸಾಧ್ಯವಾಗುವುದು ಕ್ರೀಡೆಯಲ್ಲಿ ಮಾತ್ರ. ಮಕ್ಕಳು ಎಲ್ಲಾ ಚಟುವಟಿಕೆಯಲ್ಲಿ ಹೇಗೆ ಸಂತೋಷ ಇರುತ್ತದೆಯೋ ಹಾಗೆಯೇ ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಂಡಾಗ ಮಾತ್ರ ನಮ್ಮನ್ನ ನಾವು ಮರೆತು ಬಿಡುತ್ತೇವೆ ಎಂದು ಹೇಳಿದರು.
ಕ್ರೀಡೆಯಲ್ಲಿ ನಾವು ಹೇಗೆ ಮಕ್ಕಳಾಗುತ್ತೇವೆ ಎಂದರೆ ಮಕ್ಕಳು ಹೇಗೆ ಎಲ್ಲದರಲ್ಲಿಯೂ ಸಂತೋಷವನ್ನು ಕಾಣುತ್ತಾರೋ ಹಾಗೆಯೇ ಕ್ರೀಡೆಯು ನಮಗೆ ಸಂತಸವನ್ನು ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರ ಮನಸಿಗೂ ಸಂತೋಷ, ಉಲ್ಲಾಸ, ಮನವಿಕಾಸನಗೊಳ್ಳಲಿ ಎಂದು ಹೇಳಿ ಸರ್ಕಾರದ ವತಿಯಿಂದ ಕಳೆದ ಎರಡು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವುದು ಬಹಳ ಸಂತೋಷದ ಸಂಗತಿ. ಪ್ರತಿಯೊಬ್ಬ ಅಧಿಕಾರಿಗಳು ನೌಕರರು ಕ್ರೀಡೆಯಲ್ಲಿ ಭಾಗವಹಿಸಬೇಕು, ಗೆಲುವು ಸೋಲು ಸಹಜ ಭಾಗವಹಿಸುವಿಕೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಕಚೇರಿಗಳಲ್ಲಿರುವಂತಹ ಕರ್ತವ್ಯ, ಜಂಜಾಟದAತಹ ಮನಸ್ಥಿತಿಯಿಂದ ಹೊರಗಡೆ ಬಂದು ಮನಸ್ಸಿಗೆ ಉಲ್ಲಾಸ ದೊರಕಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಪ್ರತಿಯೊಬ್ಬ ಅಧಿಕಾರಿಗಳು ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸಿ ಎಂದು ಹೇಳಿದರು.
ನಾವು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಮರ್ಥ್ಯವನ್ನು ಪಡೆಯುವುದಕ್ಕೆ ಸಹಾಯವಾಗುತ್ತದೆ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಕಛೇರಿಯಲ್ಲಿ ಮನಸ್ತಾಪಗಳು ಇದ್ದರೆ ಬಗೆ ಹರಿಯುತ್ತವೆ ಜೊತೆಗೆ ಸ್ನೇಹ ಸಂಬoಧಗಳು ಸಹ ಗಟ್ಟಿಯಾಗುತ್ತಾ ಹೋಗುತ್ತದೆ ಇಂತಹ ಒಂದು ಉತ್ತಮ ಸಂಬoಧಗಳನ್ನು ಬೆಳೆಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಪ್ರತಿಯೊಬ್ಬರೂ ಇದರ ಸದುಪಯೋಗವನ್ನು ಪಡೆದುಕೊಂಡು ಕಛೇರಿ ಹೋದ ಮೇಲು ಸಹ ಇದೆ ಉತ್ಸಾಹದಿಂದ ಮನಸ್ಸಿನಿಂದ ಕೆಲಸ ಮಾಡಿದರೆ ಸರ್ಕಾರದಲ್ಲಿ ಸೇವೆ ಮಾಡುವುದಕ್ಕೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ಎಂ ಗಾಯತ್ರಿ ಅವರು ಮಾತನಾಡಿ ಕಚೇರಿ ಕೆಲಸಗಳನ್ನು ನಿರ್ವಹಿಸುವುದು ನಮ್ಮ ದೈನಂದಿನ ಕರ್ತವ್ಯವಾಗಿದ್ದರೂ ಸಹ ಅದರ ನಡುವೆ ನಮ್ಮ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಇಂತಹ ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿ ಚಟುವಟಿಕೆಗಳು ಆಗಾಗ ಆಗುತ್ತಾ ಇರಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ ಅವರು ಒಂದು ಉತ್ತಮವಾದಂತಹ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದ್ದಾರೆ ಈ ಭಾರಿ ವಿಭಾಗ ಮಟ್ಟದಲ್ಲಿ ಇರುವುದು ಅತ್ಯುತ್ತಮವಾಗಿದೆ ಏಕೆಂದರೆ ರಾಜ್ಯ ಮಟ್ಟದಲ್ಲಿ ಕೆಲವರು ಭಾಗವಹಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಈ ಭಾರಿ ವಿಭಾಗ ಮಟ್ಟದಲ್ಲಿ ಆಗುತ್ತಿರುವ ಕಾರ್ಯಕ್ರಮವು ಜಿಲ್ಲಾ ಮಟ್ಟದಲ್ಲಿಯೂ ಆಗಬೇಕು. ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ಸಿಬ್ಬಂದಿ ವರ್ಗದವರು ಇಲ್ಲಿ ಅಧಿಕಾರಿಗಳು ಎಂದು ಯಾವುದೇ ಪದನಾಮ ಬರುವುದಿಲ್ಲ ಎಲ್ಲರೂ ಸಹ ಕ್ರೀಡಾಪಟುಗಳು ಎಂದು ಹೇಳಿ ಒಂದೇ ಮೈದಾನದಲ್ಲಿ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಯಲ್ಲಿ ಕ್ರೀಡಾ ಮನೋಭಾವದಿಂದ ಹಾಗೂ ಸ್ಪರ್ಧಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು ಇದರಿಂದ ಒಬ್ಬರಿಂದ ಒಬ್ಬರಿಗೆ ಸೌಹಾರ್ದಯುತವಾದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿದರು.
ಎಲ್ಲಾ ಸಿಬ್ಬಂದಿಗಳು ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸುವುದು ತುಂಬಾ ಮುಖ್ಯವಾಗುತ್ತದೆ ನೀವು ಪಾಲ್ಗೊಳ್ಳುವುದರಿಂದ ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ, ಸಹಾಯಕ ನಿರ್ದೇಶಕರಾದ ಜನಾರ್ಧನ್ ಎ.ಎನ್ ಹಾಗೂ ಮೈಸೂರು ವಿಭಾಗದ ಎಂಟು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.