*ಕನ್ನಡ ಬಳಕೆಯಲ್ಲಿ ಆಟೋ ಚಾಲಕರ ಪಾತ್ರ ಪ್ರಮುಖ : ಅಯೂಬ್ ಖಾನ್*
ಕನ್ನಡ ನಾಡು ನುಡಿ ರಕ್ಷಣೆ ಹಾಗೂ ಬಳಕೆಯಲ್ಲಿ ಆಟೋ ಚಾಲಕರ ಪಾತ್ರ ಪ್ರಮುಖವಾಗಿದೆ ಎಂದು
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್
ಮಯೂರ ಕನ್ನಡ ಯುವಕರ ವೇದಿಕೆ ಹಾಗೂ ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಡಾಕ್ಟರ್ ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆನಂತರ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ
ಮಾತನಾಡಿ ಅವರು
ರಾಜ್ಯದಲ್ಲಿ ಆಟೊ ಚಾಲಕರೇ ನಿತ್ಯ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕನ್ನಡಿಗರು. ಅಟೊದಲ್ಲಿ ಕನ್ನಡ ಸಾಹಿತ್ಯದ ಬರಹದ ಸಾಲುಗಳು, ಸಾಹಿತಿಗಳು, ಚಿತ್ರನಟರ ಭಾವಚಿತ್ರಗಳು ನೋಡುಗರನ್ನು ಸೆಳೆಯುವಂತೆ ಮಾಡಿರುತ್ತಾರೆ. ಆ ಮೂಲಕ ಸಾಮಾಜಿಕ ಪರಿವರ್ತನೆ ಹಾಗೂ ಕನ್ನಡ ಪ್ರೇಮ ಹೆಚ್ಚಿಸುವ ಕೆಲಸವನ್ನು ಆಟೊ ಚಾಲಕರು ಮಾಡುತ್ತಿದ್ದಾರೆ’ ಎಂದರು.
“ಅವರಲ್ಲಿನ ಕನ್ನಡತನವನ್ನು ನಾವು ಗುರುತಿಸಿ ಅಭಿನಂದಿಸಬೇಕು, ಕನ್ನಡ ಉಳಿವು ಮತ್ತು ಬೆಳವಣಿಗೆಯಲ್ಲಿ ಆಟೊ ಚಾಲಕರ ಪಾತ್ರ ಅಪಾರವಾಗಿದೆ’ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ, ಕೆಪಿಸಿಸಿ ಸದಸ್ಯರಾದ ಜಿ ಶ್ರೀನಾಥ್ ಬಾಬು, ವೈದ್ಯರಾದ ಡಾಕ್ಟರ್ ಎಸ್ ಪಿ ಯೋಗಣ್ಣ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ಅಲೋಕ್ ಆರ್ ಜೈನ್,
ಆಲನಹಳ್ಳಿ
ಎಂ ಎನ್ ಚೇತನ್ ಗೌಡ, ಎಸ್ ಎನ್ ರಾಜೇಶ್, ನಗರ ಪಾಲಿಕೆ ಮಾಜಿ ಸದ್ಯಸ್ಯ ರಘುರಾಜ್ ಅರಸ್, ಕಿಶೋರ್, ರವಿಚಂದ್ರ, ಕಿರಣ್, ಮಂಜುನಾಥ್, ಸುಬ್ರಹ್ಮಣ್ಯ, ಹರೀಶ್ ನಾಯ್ಡು, ಆನಂದ್, ಮಹಾನ್ ಶ್ರೇಯಸ್, ಚಕ್ರಪಾಣಿ, ಸುರೇಶ್, ಹಾಗೂ ಇನ್ನಿತರರು ಹಾಜರಿದ್ದರು